Back
ರಾಷ್ಟ್ರೀಯ ಗಣಿತ ದಿನಾಚರಣೆ

ಜನಸಾಮಾನ್ಯರಲ್ಲಿ ಗಣಿತದ ಬಗ್ಗೆ ಆಸಕ್ತಿ ಮೂಡಿಸುವುದು ಇದರ  ಮೂಲ  ಉದ್ದೇಶದಿಂದ ಭಾರತದ ಪ್ರಸಿದ್ದ ಗಣಿತಜ್ಞರಾದ ಶ್ರೀನಿವಾಸ ರಾಮನುಜರವರ ಸ್ಮರಣಾರ್ಥವಾಗಿ ಪ್ರತಿ ವರ್ಷ ಅವರ ಜನ್ಮ ದಿನವಾದ ಡಿಸೆಂಬರ್‌ 22 ಅನ್ನು ರಾಷ್ಟೀಯ  ಗಣಿತ ದಿನವನ್ನಾಗಿ ಆಚರಿಸಲಾಗುವುದು. ಆಗಿನಾ ಪ್ರಧಾನ ಮಂತ್ರಿಯವರು 22 ಡಿಸೆಂಬರ್‌ 2012ರಂದು ಈ ದಿನವನ್ನು ರಾಷ್ಟೀಯ  ಗಣಿತ ದಿನವೆಂದು ಘೋಷಿಸಿದರು.

ರಾಷ್ಟೀಯ  ಗಣಿತ ದಿನಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು 2012 ರಿಂದ ಪ್ರೌಢಶಾಲಾ ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ರಸಪ್ರಶ್ನೆ,  ಗಣಿತ ಒಗಟು ಬಿಡಿಸುವ ಸ್ಪರ್ಧೆ, ಮಾದರಿ ತಯಾರಿಕೆ, ಉಪನ್ಯಾಸಗಳು ಮತ್ತು ತರಬೇತಿಗಳನ್ನು ಆಯೋಜಿಸುತ್ತಿದೆ.

ಕಾರ್ಯಕ್ರಮದ ಉದ್ದೇಶಗಳು:

  • ದೈನಂದಿನ ಜೀವನದಲ್ಲಿ ಗಣಿತದ ಪರಿಕಲ್ಪನೆಯ ಬಳಕೆ ಮತ್ತು ಅಳವಡಿಕೆಯನ್ನು ವಿದ್ಯಾರ್ಥಿಗಳಿಗೆ ಮತ್ತು ಜನಸಾಮಾನ್ಯರಿಗೆ ಅರ್ಥೈಸುವುದು
  • ಗಣಿತದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು
  • ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿ ಗಣಿತದ ಅಳವಡಿಕೆ
  • ಭಾರತದ ಗಣಿತಜ್ಞರ ಸಾಧನೆಯನ್ನು ತಿಳಿದುಕೊಳ್ಳುವುದು
  • ಗಣಿತ ಕ್ಷೇತ್ರದಲ್ಲಿನ ಅವಕಾಶ ಮತ್ತು ಸಂಶೋಧನೆಗಳನ್ನು ಉತ್ತೇಜಿಸುವುದು

ಶ್ರೀನಿವಾಸ ರಾಮಾನುಜನ್ ರವರ ಹುಟ್ಟಿದ ದಿನವಾದ 22 ಡಿಸೆಂಬರ್‌ ಅನ್ನೂ ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನವು ಸಂಖ್ಯಾ ಸಿದ್ಧಾಂತ, ಅನಂತ ಸರಣಿ, ಗಣಿತದ ವಿಶ್ಲೇಷಣೆ ಸೇರಿದಂತೆ ಗಣಿತದ ಕ್ಷೇತ್ರದಲ್ಲಿನಾ ಅವರ ಕೊಡುಗೆಯ ಪ್ರಭಾವವನ್ನು ತಿಳಿದುಕೊಳ್ಳುವ ಅವಕಾಶವಾಗಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (KSCST), ಭಾರತೀಯ ವಿಜ್ಞಾನ ಸಂಸ್ಥೆ (IISc) ಆವರಣವು ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ (NCSTC), ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರ್ಕಾರ ರವರ ಸಹಯೋಗದೊಂದಿಗೆ ರಾಷ್ಟ್ರೀಯ ಗಣಿತ ದಿನಾಚರಣೆ 2022 ಅನ್ನು ದಿನಾಂಕ 22 ಡಿಸೆಂಬರ್‌ 2022 ರಂದು ಭಾರತೀಯ ವಿಜ್ಞಾನ ಸಂಸ್ಥೆ (IISc) ಆವರಣದ ಪ್ರೋ. ಸತೀಶ ಧವನ್‌ ಸಭಾಂಗಣದಲ್ಲಿ ಬೆಳ್ಳಿಗೆ 10.00 ಘಂಟೆಯಿಂದ ಆಚರಿಸಲಾಯಿತು. ಸುಮಾರು 250 ಪ್ರೌಢಶಾಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. 

ಕಾರ್ಯಕ್ರಮದ ವೇಳಾಪಟ್ಟಿ

×
ABOUT DULT ORGANISATIONAL STRUCTURE PROJECTS