ವಿಜ್ಞಾನಿ ಮತ್ತು ಇಂಜಿನಿಯರ್ ರಾಜ್ಯ ಪ್ರಶಸ್ತಿ
(ಕರ್ನಾಟಕ ಸರ್ಕಾರದಿಂದ ಸ್ಥಾಪಿಸಲಾಗಿದೆ)
ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ
ವಿಜ್ಞಾನಿ ಮತ್ತು ಇಂಜಿನಿಯರ್ ರಾಜ್ಯ ಪ್ರಶಸ್ತಿ
2022 ಮತ್ತು 2023 ಸಾಲಿಗೆ ನಾಮಪತ್ರಗಳನ್ನು (ನಾಮಿನೇಷನ್ಸ್) ಆಹ್ವಾನಿಸಲಾಗಿದೆ
ಸರ್ ಎಂ.ವಿಶ್ವೇಶ್ವರಯ್ಯ ಜೀವಮಾನ ಸಾಧನೆ ಪ್ರಶಸ್ತಿ
ಹಿರಿಯ ವಿಜ್ಞಾನಿಗಳು / ಇಂಜಿನಿಯರ್‌ಗಳಿಗೆ
|
ಡಾ| ರಾಜಾ ರಾಮಣ್ಣ ಪ್ರಶಸ್ತಿ
ವಿಜ್ಞಾನಿಗಳು / ಇಂಜಿನಿಯರ್‌ಗಳಿಗೆ
|
ಸರ್ ಸಿ. ವಿ. ರಾಮನ್ ವಿಜ್ಞಾನಿ ಪ್ರಶಸ್ತಿ
ವಿಜ್ಞಾನಿಗಳು
|
ಪ್ರೊ | ಸತೀಶ್ ಧವನ್ ಪ್ರಶಸ್ತಿ
ಇಂಜಿನಿಯರ್‌ಗಳಿಗೆ
|
ಡಾ. ಕಲ್ಪನಾ ಚಾವ್ಲಾ ಪ್ರಶಸ್
ಮಹಿಳಾ ವಿಜ್ಞಾನಿ / ಇಂಜಿನಿಯರ್‌ಗಳಿಗೆ
|
ನಾಮಪತ್ರಗಳನ್ನು (ನಾಮಿನೇಷನ್ಸ್) ಸಲ್ಲಿಸುವ ಕೊನೆಯ ದಿನಾಂಕ: 21 ಆಗಸ್ಟ್ 2023
ಕರ್ನಾಟಕ ಸರ್ಕಾರವು ರಾಜ್ಯದ ವಿಜ್ಞಾನಿ ಮತ್ತು ಇಂಜಿನೀಯರ್‍ಗಳನ್ನು ಪ್ರೋತ್ಸಾಹಿಸಲು ಪ್ರತಿವರ್ಷ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದೆ. ಈ ಪ್ರಶಸ್ತಿಗಳನ್ನು ಹೆಸರಾಂತ ವಿಜ್ಞಾನಿಗಳಾದ ಸರ್ ಎಂ. ವಿಶ್ವೇಶ್ವರಯ್ಯ, ಡಾ. ರಾಜಾ ರಾಮಣ್ಣ, ಸರ್ ಸಿ. ವಿ. ರಾಮನ್, ಪ್ರೊ. ಸತೀಶ್ ಧವನ್ ಮತ್ತು ಡಾ. ಕಲ್ಪನಾ ಚಾವ್ಲಾ ಅವರ ಹೆಸರಿನಲ್ಲಿ ನೀಡಿ ಗೌರವಿಸುತ್ತಿದೆ.
ಸರ್ ಎಂ. ವಿಶ್ವೇಶ್ವರಯ್ಯ ಹಿರಿಯ ವಿಜ್ಞಾನಿ ಪ್ರಶಸ್ತಿ
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯದ ಅಭಿವೃದ್ಧಿಗಾಗಿ ತಮ್ಮ ಜೀವನಾವಧಿಯಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಇಬ್ಬರು ಹಿರಿಯ ವಿಜ್ಞಾನಿಗಳಿಗೆ/ ಇಂಜಿನಿಯರುಗಳಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ. ಈ ಪ್ರಶಸ್ತಿಯು ರೂ. 2,00,000 ನಗದು, ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.
Ø ಸರ್ ಎಂ. ವಿಶ್ವೇಶ್ವರಯ್ಯನವರ ಹೆಸರಿನಲ್ಲಿ ನೀಡುವ ಜೀವನಾವಧಿ ಸಾಧನೆ ಪ್ರಶಸ್ತಿ ಪಡೆಯಲು ಈ ಕೆಳಗಿನ ಷರತ್ತುಗಳನ್ನು ಪೂರೈಸಿರಬೇಕು.
Ø 1. ಪ್ರಶಸ್ತಿ ಪಾತ್ರರು ಪ್ರಶಸ್ತಿ ಪ್ರಧಾನ ವರ್ಷದ ಫೆಬ್ರವರಿ 28ಕ್ಕೆ 50 ವರ್ಷ ವಯಸ್ಸಿಗಿಂತ ಮೇಲ್ಪಟ್ಟವರಾಗಿರಬೇಕು.
Ø 2. ತಮ್ಮದೇ ಆದ ಕ್ಷೇತ್ರದಲ್ಲಿ ಮೂಲಭೂತ ಸಂಶೋಧನೆ ಮೂಲಕ ಪರಿಗಣಾತ್ಮಕ ಕೊಡುಗೆ ನೀಡಿರಬೇಕು.
Ø 3. ಮಾನವ ಮತ್ತು ರಾಷ್ಟ್ರೀಯ ಅಭಿವೃದ್ಧಿಯ ಕಾರಣಕ್ಕಾಗಿ ಪರಿಶ್ರಮಿಸಿರಬೇಕು.
Ø 4. ಕರ್ನಾಟಕದಲ್ಲಿ ಹುಟ್ಟಿದವರಾಗಿರಬೇಕು ಅಥವಾ ಕರ್ನಾಟಕದಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿರಬೇಕು.
Ø 5. ಇದೇ ಪ್ರಶಸ್ತಿಯನ್ನು ಹಿಂದಿನ ವರ್ಷಗಳಲ್ಲಿ ಪಡೆದಿರಬಾರದು.
ಡಾ| ರಾಜಾ ರಾಮಣ್ಣ ಪ್ರಶಸ್ತಿ
ವಿಜ್ಞಾನ ಶಿಕ್ಷಣ / ವಿಜ್ಞಾನದ ಇತಿಹಾಸ ಮತ್ತು ತತ್ವಜ್ಞಾನ / ವಿಜ್ಞಾನ ಮತ್ತು ಸಮಾಜ, ಕ್ಷೇತ್ರಗಳಲ್ಲಿ ರಾಜ್ಯದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಇಬ್ಬರು ಹಿರಿಯ ವಿಜ್ಞಾನಿಗಳಿಗೆ/ ಇಂಜಿನಿಯರುಗಳಿಗೆ ಈ ಪ್ರಶಸ್ತಿಯನ್ನು ನೀಡುತ್ತಿದೆ. ಈ ಪ್ರಶಸ್ತಿಯು ರೂ. 1,50,000 ನಗದು, ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.
ಡಾ. ರಾಜಾರಾಮಣ್ಣನವರ ಹೆಸರಿನಲ್ಲಿ ರಾಜ್ಯ ವಿಜ್ಞಾನಿ ಪ್ರಶಸ್ತಿಯನ್ನು ಪಡೆಯಲು ಈ ಕೆಳಗಿನ ಅರ್ಹತೆ / ಷರತ್ತುಗಳನ್ನು ಪೂರೈಸಿರಬೇಕು.
Ø 1. ಅಭ್ಯರ್ಥಿಗಳು ಪ್ರಶಸ್ತಿ ಪ್ರಧಾನ ವರ್ಷದ ಫೆಭ್ರವರಿ 28 ಕ್ಕೆ ಕನಿಷ್ಠ 50 ವರ್ಷ ವಯಸ್ಸನ್ನು ಹೊಂದಿರಬೇಕು.
Ø 2. ಕರ್ನಾಟಕ ರಾಜ್ಯದಲ್ಲಿ ಹುಟ್ಟಿದವಾರಾಗಿರಬೇಕು ಅಥವಾ ಕರ್ನಾಟಕದಲ್ಲಿ ಕನಿಷ್ಠ 20 ವರ್ಷ ವಾಸವಾಗಿರುವವರಾಗಿರಬೇಕು.
Ø 3. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸಂಶೋಧನಾ ಪತ್ರಿಕೆಗಳಲ್ಲಿ 5 ಸಂಶೋಧನಾ ಪತ್ರಗಳನ್ನು ಪ್ರಕಟಿಸಿರಬೇಕು.
Ø 4. ಇದೇ ಪ್ರಶಸ್ತಿಯನ್ನು ಹಿಂದಿನ ವರ್ಷಗಳಲ್ಲಿ ಪಡೆದಿರಬಾರದು.
ಸರ್ ಸಿ. ವಿ. ರಾಮನ್ ವಿಜ್ಞಾನಿ ಪ್ರಶಸ್ತಿ
ಈ ಪ್ರಶಸ್ತಿಗಳನ್ನು ರಾಜ್ಯದ ವಿಜ್ಞಾನಿಗಳನ್ನು ಪ್ರೋತ್ಸಾಹಿಸಲು ಅವರ ವಿಶಿಷ್ಟ ಕಾರ್ಯಸಾಧನೆಯನ್ನು ಪರಿಗಣಿಸಿ, ಈ ಕೆಳಕಂಡ ಕ್ಷೇತ್ರಗಳಲ್ಲಿ ಪ್ರತೀವರ್ಷ ಐದು ವಿಜ್ಞಾನಿಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ.
Ø 1. ಭೌತ ವಿಜ್ಞಾನ ಮತ್ತು ಗಣಿತಶಾಸ್ತ್ರ
Ø 2. ರಾಸಾಯನ ವಿಜ್ಞಾನ
Ø 3. ವೈದ್ಯಕೀಯ ವಿಜ್ಞಾನ
Ø 4. ಜೀವ ವಿಜ್ಞಾನ
Ø 5. ಕೃಷಿ ವಿಜ್ಞಾನ ಮತ್ತು ಪಶುಸಂಗೋಪನೆ
ಪ್ರೊ | ಸತೀಶ್ ಧವನ್ ಇಂಜಿನಿಯರ್ ಪ್ರಶಸ್ತಿ
ಈ ಪ್ರಶಸ್ತಿಗಳನ್ನು ರಾಜ್ಯದ ಇಂಜಿನಿಯರುಗಳನ್ನು ಪ್ರೋತ್ಸಾಹಿಸಲು ಅವರ ವಿಶಿಷ್ಟ ಕಾರ್ಯಸಾಧನೆಯನ್ನು ಪರಿಗಣಿಸಿ, ನಾಲ್ಕು ಇಂಜಿನಿಯರುಗಳಿಗೆ ಪ್ರತೀವರ್ಷ ಈ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ.
ಡಾ. ಕಲ್ಪನಾ ಚಾವ್ಲಾ ಮಹಿಳಾ ವಿಜ್ಞಾನಿ / ಇಂಜಿನಿಯರ್ ಪ್ರಶಸ್ತಿ
ಈ ಪ್ರಶಸ್ತಿಗಳನ್ನು ರಾಜ್ಯದ ಮಹಿಳಾ ವಿಜ್ಞಾನಿ / ಇಂಜಿನಿಯರ್‍ಗಳನ್ನು ಪ್ರೋತ್ಸಾಹಿಸಲು ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಅವರ ವಿಶಿಷ್ಟ ಕಾರ್ಯಸಾಧನೆಯನ್ನು ಪರಿಗಣಿಸಿ, ಪ್ರತಿವರ್ಷ ಒಬ್ಬರು ಮಹಿಳಾ ವಿಜ್ಞಾನಿ / ಇಂಜಿನಿಯರ್‍ಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ.
ಸರ್ ಸಿ. ವಿ. ರಾಮನ್ ಮತ್ತು ಪ್ರೊ| ಸತೀಶ್ ಧವನ್ ರವರ ಹೆಸರಿನ್ಲಲ್ಲಿ ಯುವ ವಿಜ್ಞಾನಿಗಳಿಗೆ / ಇಂಜಿನಿಯರುಗಳಿಗೆ ಹಾಗೂ ಡಾ. ಕಲ್ಪನಾಚಾವ್ಲಾ ಹೆಸರಿನಲ್ಲಿ ಯುವ ಮಹಿಳಾ ವಿಜ್ಞಾನಿಗಳಿಗೆ / ಇಂಜಿನಿಯರುಗಳಿಗೆ ನೀಡುವ ಪ್ರಶಸ್ತಿಯನ್ನು ಪಡೆಯಲು ಈ ಕೆಳಗಿನ ಅರ್ಹತೆ ಮತ್ತು ಷರತ್ತುಗಳನ್ನು ಪೂರೈಸಿರತಕ್ಕದ್ದು.
Ø 1. ಅಭ್ಯರ್ಥಿಗಳು ಪ್ರಶಸ್ತಿ ಪ್ರಧಾನ ವರ್ಷದ ಫೆಬ್ರವರಿ ತಿಂಗಳ 28 ಕ್ಕೆ 50 ವರ್ಷ ವಯಸ್ಸನ್ನು ಮೀರಿರಬಾರದು.
Ø 2. ಕರ್ನಾಟಕದಲ್ಲಿ ಹುಟ್ಟಿದವರಾಗಿರಬೇಕು ಅಥವಾ ಕರ್ನಾಟಕದಲ್ಲಿ ಕನಿಷ್ಠ 20 ವರ್ಷಗಳ ಕಾಲ ವಾಸವಾಗಿರುವವರಾಗಿರಬೇಕು.
Ø 3. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸಂಶೋಧನಾ ಪತ್ರಿಕೆಗಳಲ್ಲಿ ಕನಿಷ್ಠ 5 ಸಂಶೋಧನಾ ಪತ್ರಗಳನ್ನು ಪ್ರಕಟಿಸಿರಬೇಕು.
Ø 4. ಇದೇ ಪ್ರಶಸ್ತಿಯನ್ನು ಹಿಂದಿನ ವರ್ಷಗಳಲ್ಲಿ ಪಡೆದಿರಬಾರದು
ಸರ್ ಸಿ. ವಿ. ರಾಮನ್, ಪ್ರೋ. ಸತೀಶ್ ಧವನ್ ಮತ್ತು ಡಾ. ಕಲ್ಪನಾ ಚಾವ್ಲಾ ಪ್ರಶಸ್ತಿಗಳು ರೂ. 1,00,000 ನಗದು, ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತವೆ.
ಪ್ರೊಫಾರ್ಮಾವನ್ನು(Format in MS Word) ಡೌನ್‌ಲೋಡ್ ಮಾಡಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ
MS Excel ನಲ್ಲಿ ಡೇಟಾ ಶೀಟ್ ಅನ್ನು ಡೌನ್‌ಲೋಡ್ ಮಾಡಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ
(ಮಾಹಿತಿಯನ್ನು ಭರ್ತಿ ಮಾಡಿದ ನಂತರ ಇಮೇಲ್ ಮೂಲಕ ಕಳುಹಿಸಲು)
Nominations may be sent in an envelope superscribed "Nomination for ___________________ Award for the year ..............." with all necessary details, as per the PROFORMA, along with two latest passport size photographs and documents.
ನಾಮಪತ್ರಗಳನ್ನು (Hard copy) ಈ ಕೆಳಗಿನ ವಿಳಾಸಕ್ಕೆ 21ನೇ ಆಗಸ್ಟ್ 2023 ರೂಳಗೆ ಕಳುಹಿಸಬೇಕು/ಸಲ್ಲಿಸಬೇಕು:
ಕಾರ್ಯದರ್ಶಿಗಳು
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ
ಭಾರತೀಯ ವಿಜ್ಞಾನ ಮಂದಿರ ಆವರಣ, ಬೆಂಗಳೂರು 560 012
Ph: 080 - 23341652, 23348848, 23348849.
E-mail: office.kscst@iisc.ac.in
https://www.kscst.org.in OR https://kscst.karnataka.gov.in
The nominations (hard copy) should be sent, on or before 21st August 2023 to the following address:
The Secretary
Karnataka State Council for Science and Technology
Indian Institute of Science Campus, Bangalore - 560 012
Ph. 080-23341652, 23348848, 23348849, 23348840
E-mail: office.kscst@iisc.ac.in
Website: https://www.kscst.org.in / https://kscst.karnataka.gov.in
NOTE:
- PROFORMA and Excel data sheet can be downloaded from our websites: https://www.kscst.org.in OR https://kscst.karnataka.gov.in
- Separate nominations should be sent to each award clearly mentioning the year of award.
- Hard copy of the filled Proforma along with necessary documents can be sent to KSCST on or before the last date.
- Softcopy of the filled Data Sheet (Excel File) can be sent to KSCST by email: office.kscst@iisc.ac.in.
- Women Scientists / Engineers (below 50 years of age) are eligible to apply for Sir C V Raman and Prof. Satish Dhawan Awards in addition to Dr. Kalpana Chawla Award. However, they have to submit the separate nominations for each Award.
- Original documents should be produced whenever called for.
- Canvassing in any form entails disqualification.
- Decision of selection committee is final and binding.