Back
ಕರ್ನಾಟಕ ಪಾರಂಪರಿಕ ಸ್ಮಾರಕಗಳ ಡಿಜಿಟಲೀಕರಣ

ಕರ್ನಾಟಕವು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ, ಅದರ ಇತಿಹಾಸವು ಎರಡು ಸಹಸ್ರಮಾನಗಳಿಗಿಂತಲೂ ಹಿಂದಿನದು. ರಾಜ್ಯವು ಹಲವಾರು ಪಾರಂಪರಿಕ ತಾಣಗಳು, ದೇವಸ್ಥಾನಗಳು, ಮಸೀದಿಗಳು, ಕೋಟೆಗಳು ಮತ್ತು ಅರಮನೆಗಳಿಗೆ ನೆಲೆಯಾಗಿದೆ. ರಾಜ್ಯವು ವಿಶ್ವಸಂಸ್ಥೆಯ UNESCO  ಗುರುತಿಸಿರುವ 2 ವಿಶ್ವ ಪಾರಂಪರಿಕ  ತಾಣಗಳಲ್ಲಿ ಹಂಪೆ ಮತ್ತು ಪಟ್ಟದಕಲ್ಲು ವಿಶ್ವ ಪಾರಂಪರಿಕ  ತಾಣಗಳನ್ನು ಹೊಂದಿದೆ.  ಇದಲ್ಲದೆ, ಚಾಲುಕ್ಯರು, ರಾಷ್ಟ್ರಕೂಟರು, ಕದಂಬರು, ಡೆಕ್ಕನ್ ಸುಲ್ತಾನರು, ವಿಜಯನಗರ ಸಾಮ್ರಾಜ್ಯ, ಮೈಸೂರಿನ ಒಡೆಯರ್‌ಗಳು, ನಾಯಕರು, ಮುಂತಾದ ವಿವಿಧ ರಾಜವಂಶಗಳ ಹಲವಾರು ಅವಶೇಷಗಳು ರಾಜ್ಯದಾದ್ಯಂತ ಹರಡಿಕೊಂಡಿವೆ. ಸಾಂಪ್ರದಾಯಿಕವಾಗಿ ಸಂಸ್ಕೃತಿ ಮತ್ತು ಪರಂಪರೆಯ ಇತಿಹಾಸವನ್ನು ಶಾಸನಗಳು, ಬರಹಗಳು, ದಾಖಲೆಗಳು, ಸಾಹಿತ್ಯ, ಕಲೆ ಮತ್ತು ವಾಸ್ತುಶಿಲ್ಪದಂತಹ ವಿವಿಧ ಮೂಲಗಳಿಂದ ಅಧ್ಯಯನ ಮಾಡಲಾಗಿದೆ. ಆಧುನಿಕ ತಂತ್ರಜ್ಞಾನವು ಸಾಂಸ್ಕೃತಿಕ ಮತ್ತು ಪರಂಪರೆಯ ಮಾಹಿತಿಯನ್ನು ಡಿಜಿಟಲ್‌ನಲ್ಲಿ ಸೆರೆಹಿಡಿಯಲು ಇತರ ವಿಧಾನಗಳನ್ನು ಸೇರಿಸಿದೆ.  ಇದು ಸಾಂಪ್ರದಾಯಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಸಹ ಪೂರಕವಾಗಿ ಸೇರಿಸಬಹುದಾಗಿದೆ.  

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (KSCST)ಯು  ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ Indian Digital Hampi-ಹಂಪಿ ಕಾರ್ಯಕ್ರಮದ ಅಡಿಯಲ್ಲಿ " ವಿಶ್ವ ಪಾರಂಪರಿಕ  ಹಂಪಿಯಲ್ಲಿನ   ವಿಶ್ವ ಪಾರಂಪರಿಕ  ಸ್ಮಾರಕಗಳನ್ನು ದಾಖಲೀಕರಿಸಲು ಹಾಗು ಅವುಗಳ ಪುನರುಜ್ಜೀವನಕ್ಕಾಗಿ ಡಿಜಿಟಲ್ ಜಿಯೋಸ್ಪೇಷಿಯಲ್ ಡೇಟಾ ಜನರೇಷನ್ ಮತ್ತು ಟೆರೆಸ್ಟ್ರಿಯಲ್   3D ಲೇಸರ್‌ ಸ್ಕ್ಯಾನಿಂಗ್" ಎಂಬ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಈ ಯೋಜನೆ ಅಡಿಯಲ್ಲಿ  ಹಂಪಿಯ 80 ವಿಶ್ವ ಪಾರಂಪರಿಕ ಸ್ಮಾರಕಗಳ 3ಡಿ ಲೇಸರ್ ಸ್ಕ್ಯಾನಿಂಗ್ ಅನ್ನು ಪೂರ್ಣಗೊಳಿಸಿದೆ ಮತ್ತು ಡಿಜಿಟಲ್ ಜಿಯೋ-ಸ್ಪೇಷಿಯಲ್  ತಂತ್ರಜ್ಞಾನವನ್ನು ಬಳಸಿ ಭೌಗೋಳಿಕ ದತ್ತಾಂಶವನ್ನು  ರಚಿಸಿ ಅಭಿವೃದ್ದಿ ಪಡಿಸಿದೆ.   3ಡಿ ಪಾಯಿಂಟ್ ಕ್ಲೌಡ್ ಡೇಟಾ, 3ಡಿ ಮೆಶ್ ಡೇಟಾ ಮತ್ತು 2D ಎಂಜಿನಿಯರಿಂಗ್ ರೇಖಾಚಿತ್ರಗಳನ್ನು  ಸಹ ರಚಿಸಿದೆ. ಈ ಡಿಜಿಟಲ್ ದತ್ತಾಂಶವು ಹಾಗು 3D ಮಾದರಿಗಳು ಜಾಗತಿಕವಾಗಿ ಪಾರಂಪರಿಕ ತಾಣವನ್ನು ಮತ್ತು ಸ್ಮಾರಕಗಳನ್ನು ಕುಳಿತಲ್ಲೇ ವೀಕ್ಷಿಸಲು,  ವರ್ಚುವಲ್ ಪ್ರವಾಸೋದ್ಯಮವನ್ನು ಸುಧಾರಿಸಲು ಪಾರಂಪರಿಕ ತಾಣವನ್ನು ಸಂರಕ್ಷಿಸಲು ಮತ್ತು ಪುನರುನಿರ್ಮಿಸಲು ಮತ್ತು ಪುನರುಜ್ಜೀವನ/ ಮರುಸ್ಥಾಪನೆ ಚಟುವಟಿಕೆಗಳನ್ನು ಕೈಗೊಳ್ಳಲು ಸಹಕಾರಿಯಾಗುತ್ತದೆ.

            ಈ IDH-ಹಂಪಿ ಯೋಜನೆ ಅನುಷ್ಠಾನದ  ಅಡಿಯಲ್ಲಿ ಪಡೆದ ಅನುಭವದೊಂದಿಗೆ ಹಾಗೂ ಮಂಡಳಿಯಲ್ಲಿ ಅಸ್ತಿತ್ವದಲ್ಲಿರುವ ಮೂಲಸೌಕರ್ಯ ಮತ್ತು ತರಬೇತಿ ಪಡೆದ ಮಾನವಶಕ್ತಿಯ ಬಳಕೆಯನ್ನು ಬಳಸಿಕೊಂಡು ಕರ್ನಾಟಕ ರಾಜ್ಯ ಸರ್ಕಾರದ ಪುರಾತತ್ವ, ವಸ್ತುಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ಸಂರಕ್ಷಿತ ಪಾರಂಪರಿಕ ತಾಣಗಳು ಮತ್ತು ಪಾರಂಪರಿಕ ಸ್ಮಾರಕಗಳನ್ನು 3ಡಿ ಲೇಸರ್ ಸ್ಕ್ಯಾನಿಂಗ್ ಮತ್ತು ಜಿಯೋ-ಸ್ಪೇಷಿಯಲ್ ತಂತ್ರಜ್ಞಾನಗಳನ್ನು ಬಳಸಿಕೊಂಡು ಕರ್ನಾಟಕ ಪಾರಂಪರಿಕ ಸ್ಮಾರಕಗಳ ಡಿಜಿಟಲೀಕರಣ (ಕೆಡಿಎಚ್) ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಕರ್ನಾಟಕ ರಾಜ್ಯದ ಎಲ್ಲಾ  ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಸಂರಕ್ಷಿತ  ಪಾರಂಪರಿಕ ತಾಣಗಳ ಡಿಜಿಟಲ್  ದತ್ತಾಂಶವನ್ನು ತಯಾರಿಸಲಾಗುತ್ತಿದೆ.

               ಕರ್ನಾಟಕ ಡಿಜಿಟಲ್ ಹೆರಿಟೇಜ್ (ಕೆಡಿಎಚ್) ಯೋಜನೆಯ ಉದ್ದೇಶವು ಪಾರಂಪರಿಕ ತಾಣಗಳು ಮತ್ತು ಪಾರಂಪರಿಕ ಸ್ಮಾರಕಗಳ ಭವಿಷ್ಯದ ಸಂರಕ್ಷಣೆ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನಕ್ಕಾಗಿ ದತ್ತಾಂಶವನ್ನು ರಚಿಸಿ, ಛಾಯಾಚಿತ್ರಗಳ ಜಿಯೋ-ಟ್ಯಾಗಿಂಗ್ ಮತ್ತು ಡೇಟಾಬೇಸ್ ಸಂಗ್ರಹಿಸಲು ಮತ್ತು ಡಿಜಿಟಲ್ ಸುಧಾರಿತ ತಂತ್ರಜ್ಞಾನಗಳ ಶಕ್ತಿಯನ್ನು ಬಳಸಿಕೊಂಡು ಪಾರಂಪರಿಕ ತಾಣಗಳ ಇತಿಹಾಸ, ಸಾಂಸ್ಕೃತಿಕ ಮತ್ತು ಪಾರಂಪರಿಕ ವಿವರಗಳನ್ನು ಭೌಗೋಳಿಕವಾಗಿ ಮತ್ತು ಜಾಗತಿಕವಾಗಿ ತೋರಿಸಲು ಅನುಕೂಲವಾಂತಾಗುತ್ತದೆ. ಪಾರಂಪರಿಕ ಕಟ್ಟಡಗಳು, ಶಾಸನಗಳು, ಪುರಾತತ್ವ ಸ್ಥಳಗಳು, ದೇವಾಲಯಗಳು, ಮಸೀದಿಗಳು, ಬಾವಿಗಳು, ಕಲ್ಯಾಣಿ ಮತ್ತು ದರ್ಗಾ ಕರ್ನಾಟಕ ಸರ್ಕಾರದ ಪುರಾತತ್ವ ಇಲಾಖೆ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆಯ (DAMH) ವ್ಯಾಪ್ತಿಗೆ ಒಳಪಡುತ್ತವೆ.

               ಈ ಕಾರ್ಯಕ್ರಮದ ಭಾಗವಾಗಿ ಮಂಡಳಿಯು ಜಿಯೋ-ಸ್ಪೇಷಿಯಲ್ ಮತ್ತು 3ಡಿ ಲೇಸರ್ ಸ್ಕ್ಯಾನಿಂಗ್ ತಂತ್ರಜ್ಞಾನಗಳನ್ನು ಬಳಸಿಕೊಂಡು ಹಂತ ಹಂತವಾಗಿ ರಾಜ್ಯದ ಸುಮಾರು 844 ಸಂರಕ್ಷಿತ ಪಾರಂಪರಿಕ ಸ್ಮಾರಕಗಳ ಡಿಜಿಟಲೀಕರಣಗೊಳಿಸಲು ಪುರಾತತ್ವ ಇಲಾಖೆ ಯೊಂದಿಗೆ ಕರಾರು /ಒಪ್ಪಂದ ಮಾಡಿಕೊಂಡಿದೆ. ರಾಜ್ಯದ ಎಲ್ಲಾ ಪಾರಂಪರಿಕ ಸ್ಮಾರಕಗಳ ಡಿಜಿಟಲೀಕರಣವನ್ನು ವಿಭಾಗವಾರು ಹಂತ ಹಂತವಾಗಿ ಕೈಗೊಂಡಿದ್ದು ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳ ಎಲ್ಲಾ ಜಿಲ್ಲೆಗಳಲ್ಲಿ  ಈ ಯೋಜನೆಯನ್ನು ಅನುಷ್ಠಾನ ಗೊಳಿಸುತ್ತಿದೆ.

 

KDH ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ

    ಕರ್ನಾಟಕ ಡಿಜಿಟಲ್ ಹೆರಿಟೇಜ್ ಯೋಜನೆಯ ಉದ್ದೇಶಗಳು ಈ ಕೆಳಗಿನಂತಿವೆ

  • ಎಲ್ಲಾ ಪಾರಂಪರಿಕ ತಾಣಗಳ ಮತ್ತು ಸ್ಮಾರಕಗಳ ಭೌಗೋಳಿಕ ಸ್ಥಳ, ವಿವರಗಳನ್ನು GPS ತಂತ್ರಜ್ಞಾನಗಳನ್ನು ಬಳಸಿಕೊಂಡು, ಸಸರೆರಹಿಡಿಯುವುದು ಮತ್ತು ಇವುಗಳ ಛಾಯಚಿತ್ರ ಸಂಗ್ರಹಿಸಿ ಛಿತ್ರಿಕರಿಸುವುದು.
  • ಜಿಯೋ-ಸ್ಪೇಶಿಯಲ್ ತಂತ್ರಜ್ಞಾನಗಳನ್ನು (GPS, GIS, RS) ಬಳಸಿಕೊಂಡು ಎಲ್ಲಾ ಪಾರಂಪರಿಕ ಸ್ಮಾರಕಗಳ ವಿವಿಧ ದತ್ತಾಂಶ ಜೊತೆಗೆ ಛಾಯಾಚಿತ್ರಗಳ ಜಿಯೋ-ಟ್ಯಾಗಿಂಗ್ ಮತ್ತು ಜಿಯೋ-ಸ್ಪೇಶಿಯಲ್ ಡೇಟಾಬೇಸ್ ರಚನೆ
  • 3D ಪಾಯಿಂಟ್ ಕ್ಲೌಡ್ ಡೇಟಾ, 3D ಮೆಶ್ ಮಾಡೆಲ್‌ಗಳು ಮತ್ತು ಈ ಸ್ಮಾರಕಗಳ CAD 2D ಇಂಜಿನಿಯರಿಂಗ್ ರೇಖಾಚಿತ್ರಗಳ ತಯಾರಿಸುವುದು.

  • ಈ ಡಿಜಿಟಲ್ ದತ್ತಾಂಶವು ಹಾಗೂ ಲೇಸರ್ ಸ್ಕ್ಯಾನ್ 3ಡಿ ಮಾದರಿಗಳು ಪಾರಂಪರಿಕ ತಾಣಗಳ ಪುನರುಜ್ಜೀವನ ಮತ್ತು ಸಂರಕ್ಷಣೆಗಾಗಿ ತುಂಬಾ ಸಹಕಾರಿಯಾಗುತ್ತವೆ.
  • ಈ ಡಿಜಿಟಲ್ ದತ್ತಾಂಶವು ಹಾಗು 3D ಮಾದರಿಗಳು ಜಾಗತಿಕವಾಗಿ ಪಾರಂಪರಿಕ ತಾಣವನ್ನು ಮತ್ತು ಸ್ಮಾರಕಗಳನ್ನು ಕುಳಿತಲ್ಲೇ ವೀಕ್ಷಿಸಲು ಸಹಕಾರಿಯಾಗುವುದಲ್ಲದೇ ವರ್ಚುವಲ್ ಪ್ರವಾಸೋದ್ಯಮವನ್ನು ಉತ್ತೇಜಿಸಿದಂತಾಗುತ್ತದೆ.
  • 3D ಪಾಯಿಂಟ್ ಕ್ಲೌಡ್ ಡೇಟಾ, 3D ಮೆಶ್ ಮಾಡೆಲ್‌ಗಳು ಮತ್ತು ಸ್ಮಾರಕಗಳ CAD 2D ಇಂಜಿನಿಯರಿಂಗ್ ರೇಖಾಚಿತ್ರಗಳು ಸ್ಮಾರಕಗಳನ್ನು ಪುನರುಜ್ಜೀವನ/ಮರುಸ್ಥಾಪನೆ ಮಾಡಲು ಹಾಗೂ ಈ ತಾಣಗಳಲ್ಲಿ ಅಭಿವೃದ್ದಿ ಚಟುವಟಿಕೆಗಳನ್ನು ಕೈಗೊಳ್ಳಲು ಸಹಕಾರಿಯಾಗುತ್ತದೆ.
  • ಡಿಜಿಟಲ್ ದತ್ತಾಂಶವು ಹಾಗೂ ಲೇಸರ್ ಸ್ಕ್ಯಾನ್ 3ಡಿ ಮಾದರಿಗಳು ಸಂಶೋದನಾ ವಿಧ್ಯಾರ್ಥಿಗಳಗೆ, ಇತಿಹಾಸಗಕಾರರಿಗೆ ಮತ್ತು ಸಂಶೋದನಾ ಸಂಸ್ಥೆಗಳಿಗೆ ಈ ಸ್ಮಾರಕಗಳ ಇತಿಹಾಸ, ಸಂಸ್ಕೃತಿ ಮತ್ತು ಕಾಲ ತಿಳಿಯಲು ತುಂಬಾ ಸಹಕಾರಿಯಾಗುತ್ತವೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:

ಡಾ.ಯು.ಟಿ. ವಿಜಯ್

ಮುಖ್ಯ ವೈಜ್ಞಾನಿಕ ಅಧಿಕಾರಿ ಮತ್ತು ಪ್ರಧಾನ ಸಂಶೋಧಕರು – ಕೆಡಿಹೆಚ್

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ

ಭಾರತೀಯ ವಿಜ್ಞಾನ ಮಂದಿರ, ಬೆಂಗಳೂರು – 560012

ದೂರವಾಣಿ: 080-23341652, 23348848

ಇಅಂಚೆ: utv.kscst@ka.gov.in, utv@kscst.org.in

 

ಯೋಜನಾ ತಂಡ:

ರಾಜಶೇಖರ. ಜಿ

ಅಭಿಷೇಕ್. ಎಸ್                                                    

×
ABOUT DULT ORGANISATIONAL STRUCTURE PROJECTS