Back
ಇಂಧನ ಕೋಶ

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು ಕಳೆದ ನಾಲ್ಕು ದಶಕಗಳಿಂದ ನೈಸರ್ಗಿಕ ಇಂಧನ ಮೂಲಗಳ ಬಳಕೆಯ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದೆ. ಮಂಡಳಿಯು ವೈಜ್ಞಾನಿಕ ಸಂಸ್ಥೆಗಳ ಹಾಗೂ ಸರಕಾರಿ ಸಂಸ್ಥೆಗಳ ಸಹಯೋಗದಿಂದ ಸಂಶೋಧನೆ, ಅಭಿವೃದ್ಧಿ ಹಾಗೂ ಅನುಷ್ಠಾನಗೊಳಿಸಿ ನವೀಕರಿಸಬಹುದಾದ ಇಂಧನ ಚಟುವಟಿಕೆಗಳನ್ನು ಉತ್ತೆಜಿಸಿ, ಉದ್ಯೋಗ ಮತ್ತು ಗ್ರಾಮೀಣ ಜೀವನೋಪಾಯ ಅವಕಾಶವನ್ನು ಸೃಷ್ಟಿಸಿದೆ.
 
1980-1995ರ ಅವಧಿಯಲ್ಲಿ ಮಂಡಳಿಯನ್ನು ನವೀಕರಿಸಬಹುದಾದ ಇಂಧನ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ನೋಡಲ್ ಏಜೆನ್ಸಿಯಾಗಿ ಭಾರತ ಸರ್ಕಾರದ ಅಸಾಂಪ್ರದಾಯಿಕ ಇಂಧನ ಮೂಲಗಳ ಸಚಿವಾಲಯವು ಕರ್ನಾಟಕದಲ್ಲಿ ಗುರುತಿಸಿದೆ.
 
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಹಾಗೂ ಇತರೆ ವಿಜ್ಞಾನಿಕ ಸಂಸ್ಥೆಗಳು ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳನ್ನು ಪ್ರಸಾರ ಮಾಡುವುದರ ಜೊತೆಗೆ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹಲವಾರು ತಂತ್ರಜ್ಞಾನಗಳನ್ನು ಕಾರ್ಯಗತಗೊಳಿಸಿದೆ. ಮಂಡಳಿಯ ಕೆಲವು ಯಶಸ್ವಿ ಯೋಜನೆಗಳಾದ ಅಸ್ತ್ರ (ASTRA) ಓಲೆ, ಸಮುದಾಯ ಜೈವಿಕ ಅನಿಲ ಸ್ಥಾವರಗಳು, ಹೊಗೆರಹಿತ ಮತ್ತು ಇಂಧನ-ಸಮರ್ಥ ಕಟ್ಟಿಗೆ ಒಲೆಗಳು, ಸೌರ ವಾಟರ್ ಹೀಟರ್‌ಗಳ ಮತ್ತು ಬಯೋಮಾಸ್ ಗ್ಯಾಸಿಫೈರ್ ಗಳು ಪ್ರಮುಖ ಇಂಧನ ಕಾರ್ಯಕ್ರಮಗಳಾಗಿವೆ.
 
ಅಸ್ತ್ರ (ASTRA) ಓಲೆ: ಭಾರತೀಯ ವಿಜ್ಞಾನ ಸಂಸ್ಥೆ ಯೂ 1980 ರ ದಶಕದಲ್ಲಿ ಅಸ್ತ್ರ ಓಲೆಯನ್ನು ಅಭಿವೃದ್ಧಿಪಡಿಸಿದ್ಧು ಇದರಲ್ಲಿ 3 ಪ್ಯಾನ್‌ಗಳ ಹೊಗೆರಹಿತ ಓಲೆಗಳಿದ್ದು 30% - 40% ದಕ್ಷತೆ ಹೊಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಅಸ್ತ್ರ ಓಲೆಗಳನ್ನು ಅಳವಡಿಸಲಾಗಿದೆ.
 
ಜೈವಿಕ ಅನಿಲ ಯೋಜನೆ: ಮಂಡಳಿಯು ರಾಷ್ಟ್ರೀಯ ಅನಿಲ ಸ್ಥಾವರ ಯೋಜನೆಯನ್ನು ರಾಜ್ಯದಂತ ಗ್ರಾಮೀಣ ಪ್ರದೇಶಗಳಲ್ಲಿ ಪ್ರಚಾರಗೊಳಿಸಲು ಹಲವು ಪ್ರಾತ್ಯಕ್ಷಿಕೆ ಘಟಕಗಳನ್ನು ಸ್ಥಾಪಿಸಿ ರೈತರನ್ನು ಉತ್ತೇಜಿಸಿ ಸುಮಾರು 6 ಲಕ್ಷಕ್ಕೂ ಹೆಚ್ಚು ಜೈವಿಕ ಅನಿಲ ಸ್ಥಾವರಗಳನ್ನು ಸ್ಥಾಪಿಸಲಾಗಿತ್ತು.
ಸಮುದಾಯ ಜೈವಿಕ ಅನಿಲ ಘಟಕಳನ್ನು ವಿದ್ಯುತ್ ಸಂಪರ್ಕವಿಲ್ಲದ ಗ್ರಾಮಗಳಲ್ಲಿ ಸ್ಥಾಪಿಸಿ ಕುಡಿಯುವ ನೀರು ಸರಬರಾಜು ಹಾಗೂ ಬೀದಿ ದೀಪಗಳ ವಿದ್ಯುತ್ ಸಂಪರ್ಕಕ್ಕಾಗಿ ಹಲವಾರು ಗ್ರಾಮಗಳಲ್ಲಿ ಸ್ಥಾಪಿಸಲಾಯಿತು.
 
ಬಯೊಮಾಸ್ ಗ್ಯಾಸಿಫೈರ್: ಮಂಡಳಿಯು ಬಯೊಮಾಸ್ ಗ್ಯಾಸಿಫೈರ್ ತಂತ್ರಜ್ಞಾನವನ್ನು ಪ್ರಚೋದಿಸಲು ಗ್ರಾಮೀಣ ಪ್ರದೇಶಗಳನ್ನು ಕೇಂದ್ರ ಸರ್ಕಾರದ ಧನ ಸಹಾಯದ ಅಡಿಯಲ್ಲಿ ಕೃಷಿ ಬಳಕೆಗಾಗಿ ನೀರನ್ನು ಎತ್ತುವುದಕ್ಕಾಗಿ ೫೦೦ ಕ್ಕೂ ಹೆಚ್ಚು ಬಯೊಮಾಸ್ ಗ್ಯಾಸಿಫೈರ್ ಗಳನ್ನೂ ಸ್ಥಾಪಿಸಲಾಯಿತು.
 
ಸೋಲಾರ್ ವಾಟರ್ ಹೀಟರ್: ಕೇಂದ್ರ ಸರ್ಕಾರದ ಧನ ಸಹಾಯದ ಅಡಿಯಲ್ಲಿ ನೀರನ್ನು ಬಿಸಿಮಾಡಲು ಬಳಸಲಾಗುವ ಸೋಲಾರ್ ವಾಟರ್ ಹೀಟರ್ ತಂತ್ರಜ್ಞಾನವನ್ನು ರಾಜ್ಯದಂತ ಗೃಹ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹೋಟೆಲ್ ಗಳು ಹಾಸ್ಟೆಲ್ ಗಳು, ಆಸ್ಪತ್ರೆಗಳು ಮತ್ತು ಕೈಗಾರಿಕೆಗಳಲ್ಲಿ ಸ್ಥಾಪಿಸುವ ನಿಟ್ಟಿನಲ್ಲಿ ಪ್ರಾತ್ಯಕ್ಷಿಕೆ ಮತ್ತು ಬಳಕೆ ಕರ್ನಾಟಕದಾದ್ಯಂತ ಈ ತಂತ್ರಜ್ಞಾನವನ್ನು ಪರಿಚಯಿಸಲಾಯಿತು. ಮುಂಧುವರೆದಂತೆ ಈಗ, ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚು ಸೋಲಾರ್ ವಾಟರ್ ಹೀಟರ್ ಬಳಕೆದಾರರು ಮತ್ತು ತಯಾರಕರನ್ನು ಹೊಂದಿದೆ.
 
ಕಿರು ಜಲವಿದ್ಯುತ್ ಯೋಜನೆಗಳು: ಕೆಎಸ್‌ಸಿಎಸ್‌ಟಿಯು ಕರ್ನಾಟಕದ ಮಲಿನಾಡು ಪ್ರದೇಶಗಳಲ್ಲಿ ಮೈಕ್ರೋ-ಹೈಡಲ್/ಪಿಕೊ-ಹೈಡ್ರಲ್ ಪವರ್ ಪ್ಲಾಂಟ್ಗಳನ್ನು ಸ್ಥಾಪಿಸಲು ಹಲವಾರು  ಸೂಕ್ತವಾದ ಪ್ರದೇಶವನ್ನು ಗುರುತಿಸಿ, ಹಲವು ಹಳ್ಳಿಗಳ ವಿದ್ಯುದ್ದೀಕರಣಕ್ಕಾಗಿ ಸಮುದಾಯ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲಾಗಿದೆ.
 
ಗಾಳಿ ಮಾಪನ ಕೇಂದ್ರ:  ಕೆಎಸ್‌ಸಿಎಸ್‌ಟಿಯು ಭಾರತೀಯ ಹವಾಮಾನ ಇಲಾಖೆ ಮತ್ತು ರಾಷ್ಟ್ರೀಯ ಏರೋಸ್ಪೇಸ್ ಲ್ಯಾಬೋರೇಟರೀಸ್ (ಎನ್‌ಎಎಲ್) ಸಹಯೋಗದೊಂದಿಗೆ ವಿದ್ಯುತ್ ಉತ್ಪಾದನೆಗೆ ವಿಂಡ್ ಮಿಲ್‌ಗಳನ್ನು ಸ್ಥಾಪಿಸಲು ಗಾಳಿಯ ಸಾಮರ್ಥ್ಯವನ್ನು ಅಳೆಯಲು ರಾಜ್ಯದಾದ್ಯಂತ 80 ಕ್ಕೂ ಹೆಚ್ಚು ಗಾಳಿ ಮಾಪನ/ವಿಂಡ್ ಮ್ಯಾಪಿಂಗ್ ಮತ್ತು ವಿಂಡ್ ಮಾನಿಟರಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲಾಗಿದೆ. ಸಮೀಕ್ಷೆಯ ಮೂಲಕ, ರಾಜ್ಯದಲ್ಲಿ 13,000 MW ಸಾಮರ್ಥ್ಯವನ್ನು ಸ್ಥಾಪಿಸಲು ಸೂಕ್ತವಾದ ಸ್ಥಳಗಳನ್ನು ಗುರುತಿಸಲಾಗಿದೆ. ಕರ್ನಾಟಕವು 5000 ಮೆಗಾವ್ಯಾಟ್‌ಗಿಂತಲೂ ಹೆಚ್ಚು ವಿಂಡ್ ಟರ್ಬೈನ್‌ಗಳ ಸ್ಥಾಪಿತ ಸಾಮರ್ಥ್ಯವನ್ನು ಹೊಂದಿದ್ದು, ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
 
ಎಸ್‌ಸಿಎಸ್‌ಟಿಯು ದೈನಂದಿನ ಜನಸಾಮಾನ್ಯರ ಉಪಯೋಗಕ್ಕಾಗಿ ಸಮರ್ಥನೀಯ ತಂತ್ರಜ್ಞಾನಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರವನ್ನು ವಹಿಸುವುದರ ಜೊತೆಗೆ, ವಿಶ್ವವಿದ್ಯಾಲಯಗಳು ಮತ್ತು ತಾಂತ್ರಿಕ  ಸಂಸ್ಥೆಗಳಲ್ಲಿ ಸಂಶೋಧನೆ, ಅಭಿವೃದ್ಧಿ ಮತ್ತು ಆವಿಷ್ಕಾರಗಳನ್ನು ಪ್ರೊತ್ಸಯಿಸುತ್ತದೆ. ಕಳೆದ ದಶಕದಲ್ಲಿ, ಇಂಧನ ಕೋಶ ಮತ್ತು ಜೈವಿಕ ಇಂಧನ ಹೊಸ ಕೋಶವನ್ನು ಸ್ಥಾಪಿಸುವ ಮೂಲಕ ಸಾಂಪ್ರದಾಯಿಕವಲ್ಲದ ಇಂಧನಗಳ ಬಳಕೆಯನ್ನು ಪ್ರೋತ್ಸಹಿಸುದು ಮತ್ತು ಜನಪ್ರಿಯಗೊಳಿಸುವಲ್ಲಿ ಮಂಡಳಿಯು ಪ್ರಮುಖ ಪಾತ್ರ ವಹಿಸಿದೆ.
 
ಕೆಎಸ್‌ಸಿಎಸ್‌ಟಿಯು 1992-93ರಲ್ಲಿ ಭಾರತ ಸರ್ಕಾರದ (MNRE) ಯಿಂದ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗಾಗಿ ಭಾರತದ ಪ್ರಧಾನ ಮಂತ್ರಿಯಿಂದ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ನವೀಕರಿಸಬಹುದಾದ ಇಂಧನ ಚಟುವಟಿಕೆಗಳನ್ನು ಕರ್ನಾಟಕದಲ್ಲಿ ಅನುಷ್ಠಾನಗೊಳಿಸಲು ಮತ್ತು ಜನಪ್ರಿಯಗೊಳಿಸಲು, ತಾಂತ್ರಿಕ ಬೆಂಬಲವನ್ನು ಒದಗಿಸುವ ಮುಖ್ಯ ಉದ್ದೇಶದಿಂದ ಜೈವಿಕ ಇಂಧನ ಕೋಶವನ್ನು ಸ್ಥಾಪಿಸಲಾಗಿದೆ.
 
ಚಟುವಟಿಕೆಗಳು:
 • ನವೀಕರಿಸಬಹುದಾದ ಇಂಧನ ಯೋಜನೆಗಳ ಅನುಷ್ಠಾನಕ್ಕೆ ತಾಂತ್ರಿಕ ಸಲಹೆ ಮತ್ತು ನಿರ್ವಹಣಾ ಬೆಂಬಲವನ್ನು ಒದಗಿಸುತ್ತದೆ.
 • ಮೇಲ್ಛಾವಣಿ ಸೌರವಿದ್ಯುತ್ ಸ್ಥಾವರಗಳ ಸ್ಥಾಪನೆಯನ್ನು ಉತ್ತೆಜನಗೊಳಿಸಲು ಸೌರ ವಿದ್ಯುತ್ ಘಟಕ ಸ್ಥಾಪಿಸಲು ಬೇಕಾದ ತಾಂತ್ರಿಕ ಸಹಾಯವನ್ನು ನೀಡುತ್ತಿದೆ.
 • ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಮತ್ತು ಡಿ) ಸಂಸ್ಥೆಗಳು ಅಭಿವೃದ್ಧಿಪಡಿಸಿದ ಹೊಸ ತಂತ್ರಜ್ಞಾನಗಳನ್ನು ಪರೀಕ್ಷಿಸುವುದು ಮತ್ತು ಪ್ರಾತ್ಯಕ್ಷಿಸುವುದು.
 • ಸ್ಥಳೀಯ ನೈಸರ್ಗಿಕ ಸಂಪನ್ಮೂಲಗಳಾದ ಕಿರು ಜಲವಿದ್ಯುತ್, ಸೌರವಿದ್ಯುತ್ ಗಾಳಿ ಯಂತ್ರ ಮತ್ತು ಬಯೋಮಾಸ್ ಇಂಧನ ಉಪಯೋಗಿಸಿಕೊಂಡು ವಿದ್ಯುತ್ ಸಂಪರ್ಕರಹಿತ ಯೋಜನೆಗಳಿಗೆ ಪೂರಕ ತಾಂತ್ರಿಕ ವರದಿಗಳನ್ನು ತಯಾರಿಸುತ್ತಿದೆ. ವಿದ್ಯುತ್ ಯೋಜನಾ ವರದಿ ತಯಾರಿಸಿ ತಾಂತ್ರಿಕ ಸಹಕಾರ ನೀಡುತ್ತಿದೆ.
 • ಸರ್ಕಾರಿ ಕಾರ್ಯಕ್ರಮಗಳ ಅಡಿಯಲ್ಲಿ ಸ್ಥಾಪಿಸಲಾದ ನವೀಕರಿಸಬಹುದಾದ ಇಂಧನ ಉಪಕರಣಗಳು / ಸಾಧನಗಳ ತಾಂತ್ರಿಕ ಮೌಲ್ಯಮಾಪನ

ಮಂಡಳಿಯು 2010 ರಿಂದ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ (KSBDB) ಸಹಯೋಗದೊಂದಿಗೆ ಜೈವಿಕ ಇಂಧನ ಅಭಿವೃದ್ಧಿ ಹಾಗೂ ಬಳಕೆಯ ಬಗ್ಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜೈವಿಕ ಇಂಧನ ಸಂಶೋಧನೆ, ಮಾಹಿತಿ ಪ್ರಾತ್ಯಕ್ಷಿಕೆ ಕೇಂದ್ರಗಳನ್ನು (BRIDC) ಸ್ಥಾಪಿಸಲಾಗಿದ್ದು, ಜೈವಿಕ ಇಂಧನ ಕಾರ್ಯಕ್ರಮ ಅಭಿವೃದ್ಧಿಯ ಬಗ್ಗೆ ತಾಂತ್ರಿಕ ಸಲಹೆ ಹಾಗೂ ತರಬೇತಿ ನೀಡುತ್ತಿದೆ. ಮಂಡಳಿಯು ಜೈವಿಕ ಇಂಧನ ಕ್ಷೇತ್ರದ ಹೊಸ ತಂತ್ರಜ್ಞಾನಗಳ ಬಗ್ಗೆ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಕಾರ್ಯಗಾರ, ತರಬೇತಿ ಶಿಬಿರಗಳನ್ನು ಹಾಗೂ ಜೈವಿಕ ಉತ್ಪಾದನಾ ಪ್ರಾತ್ಯಕ್ಷತೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ.
 
ಚಟುವಟಿಕೆಗಳು:
 • ಜೈವಿಕ ಇಂಧನ, ಜೈವಿಕ ಅನಿಲ ಮತ್ತು ಜೈವಿಕ ಡೀಸೆಲ್ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಜೈವಿಕ ಇಂಧನ ನೀತಿಗಳ ಬಗ್ಗೆ ಅರಿವು ಮೂಡಿಸುವುದು.
 • ಕರ್ನಾಟಕದಲ್ಲಿ ಜೈವಿಕ ಇಂಧನ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಲು ಮತ್ತು ಅನುಷ್ಠಾನಗೊಳಿಸಲು ಯಶಸ್ವಿ ತಂತ್ರಜ್ಞಾನಗಳನ್ನು ಗುರುತಿಸುವುದು
 • ಜೈವಿಕ ಇಂಧನ ಉತ್ಪಾದನೆಗಾಗಿ ಕರ್ನಾಟಕದಲ್ಲಿ ಸಾಮರ್ಥ್ಯ ಇರುವ ಜೈವಿಕ ಸಂಪನ್ಮೂಲಗಳ ಮೌಲ್ಯಮಾಪಿಸುವುದು.
 • ಬಿಬಿಎಂಪಿ ವರ್ಡ್ಸ್ ಗಳಿಗೆ ಸೇರಿದ ಹೋಟೆಲ್ ಗಳು, ಬಳಸಿದ ಅಡಿಗೆ ಎಣ್ಣೆ (UCO) ಸಾಮರ್ಥ್ಯದ ಸಮೀಕ್ಷೆಸುವುದು ಮತ್ತು ದತ್ತಾಂಶಗಳನ್ನು ಸಂಗ್ರಹಿಸಿ ವಿಶ್ಲೇಷಣಾ ವರದಿಯನ್ನು ತಯಾರಿಸುವುದು.
 • ಜೈವಿಕ ಇಂಧನ ಸಂಶೋಧನಾ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರ (BRIDC) ಮತ್ತು ಜೈವಿಕ ಇಂಧನ ಉದ್ಯಾನವನಗಳ (BP) ಜೈವಿಕ ಇಂಧನ ಚಟುವಟಿಕೆಗಳ ತಾಂತ್ರಿಕ ಸಲಹೆ ಹಾಗೂ ತರಬೇತಿ ನೀಡುತ್ತಿದೆ.
 • ವಿಶ್ವ ಜೈವಿಕ ಇಂಧನ ದಿನಾಚರಣೆ ಮತ್ತು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸುವುದು.
 • ಕೆಎಸ್‌ಸಿಎಸ್‌ಟಿಯ ವಿದ್ಯಾರ್ಥಿ ಯೋಜನೆಯ ಕಾರ್ಯಕ್ರಮದ (ಎಸ್‌ಪಿಪಿ) ಮೂಲಕ ವಿದ್ಯಾರ್ಥಿಗಳಿಗೆ ಧನಸಹಾಯ ನೀಡುವುದರ ಮೂಲಕ ಜೈವಿಕ ಇಂಧನ ಕ್ಷೇತ್ರವನ್ನು ಪ್ರೋತ್ಸಹಿಸುತಿದೆ.
 • ಹೊಸ ವ್ಯಾಪಾರೋದ್ಯಮಿಗಳಿಗೆ (EDT) ಜೈವಿಕ ಇಂಧನ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ನೀಡುತ್ತಿದೆ.
 • ಕಾರ್ಯಾಗಾರಗಳು, ಸಮ್ಮೇಳನಗಳು ಮತ್ತು ತರಬೇತಿ ಕಾರ್ಯಕ್ರಮಗಳ ಮೂಲಕ ಜೈವಿಕ ಇಂಧನ ಚಟುವಟಿಕೆಗಳನ್ನು ಜನಪ್ರಿಯಗೊಳಿಸುವುದು.
 • ಇಂಟರ್ನ್‌ಶಿಪ್ ಕಾರ್ಯಕ್ರಮದ ಮೂಲಕ ಜೈವಿಕ ಶಕ್ತಿ ವಲಯದಲ್ಲಿ ಸಂಶೋಧನೆಗಾಗಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಮತ್ತು ಮಾರ್ಗದರ್ಶನ ಮಾಡುವುದು.

×
ABOUT DULT ORGANISATIONAL STRUCTURE PROJECTS