Back
ವಿಜ್ಞಾನ ಸಂವಹನ ಕಾರ್ಯಕ್ರಮಗಳು

ಜನಸಾಮಾನ್ಯರಲ್ಲಿ ಗಣಿತದ ಬಗ್ಗೆ ಆಸಕ್ತಿ ಮೂಡಿಸುವುದು ಇದರ  ಮೂಲ  ಉದ್ದೇಶದಿಂದ ಭಾರತದ ಪ್ರಸಿದ್ದ ಗಣಿತಜ್ಞರಾದ ಶ್ರೀನಿವಾಸ ರಾಮನುಜರವರ ಸ್ಮರಣಾರ್ಥವಾಗಿ ಪ್ರತಿ ವರ್ಷ ಅವರ ಜನ್ಮ ದಿನವಾದ ಡಿಸೆಂಬರ್‌ 22 ಅನ್ನು ರಾಷ್ಟೀಯ  ಗಣಿತ ದಿನವನ್ನಾಗಿ ಆಚರಿಸಲಾಗುವುದು. ಆಗಿನಾ ಪ್ರಧಾನ ಮಂತ್ರಿಯವರು 22 ಡಿಸೆಂಬರ್‌ 2012ರಂದು ಈ ದಿನವನ್ನು ರಾಷ್ಟೀಯ  ಗಣಿತ ದಿನವೆಂದು ಘೋಷಿಸಿದರು.

ರಾಷ್ಟೀಯ  ಗಣಿತ ದಿನಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು 2012 ರಿಂದ ಪ್ರೌಢಶಾಲಾ ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ರಸಪ್ರಶ್ನೆ,  ಗಣಿತ ಒಗಟು ಬಿಡಿಸುವ ಸ್ಪರ್ಧೆ, ಮಾದರಿ ತಯಾರಿಕೆ, ಉಪನ್ಯಾಸಗಳು ಮತ್ತು ತರಬೇತಿಗಳನ್ನು ಆಯೋಜಿಸುತ್ತಿದೆ.

ಕಾರ್ಯಕ್ರಮದ ಉದ್ದೇಶಗಳು:

  • ದೈನಂದಿನ ಜೀವನದಲ್ಲಿ ಗಣಿತದ ಪರಿಕಲ್ಪನೆಯ ಬಳಕೆ ಮತ್ತು ಅಳವಡಿಕೆಯನ್ನು ವಿದ್ಯಾರ್ಥಿಗಳಿಗೆ ಮತ್ತು ಜನಸಾಮಾನ್ಯರಿಗೆ ಅರ್ಥೈಸುವುದು
  • ಗಣಿತದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು
  • ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿ ಗಣಿತದ ಅಳವಡಿಕೆ
  • ಭಾರತದ ಗಣಿತಜ್ಞರ ಸಾಧನೆಯನ್ನು ತಿಳಿದುಕೊಳ್ಳುವುದು
  • ಗಣಿತ ಕ್ಷೇತ್ರದಲ್ಲಿನ ಅವಕಾಶ ಮತ್ತು ಸಂಶೋಧನೆಗಳನ್ನು ಉತ್ತೇಜಿಸುವುದು

ಪ್ರತಿ ವರ್ಷ ಫೆಬ್ರವರಿ 28 ರಂದು ಸರ್ ಸಿ ವಿ ರಾಮನ್ ರ "ರಾಮನ್ ಪರಿಣಾಮ" ಆವಿಷ್ಕಾರದ ಸ್ಮರಣಾರ್ಥವಾಗಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಗಳ ಸಹಯೋಗದೊಂದಿಗೆ ದೇಶಾದಾದ್ಯಂತ ವಿಜ್ಞಾನಕ್ಕೆ ಸಂಬಂಧಿತ ಚಟುವಟಿಕೆಗಳನ್ನು ಆಯೋಜಿಸಲು ಉತ್ತೇಜಿಸುತ್ತದೆ.

1987 ರಿಂದ ಪ್ರತಿ ವರ್ಷವು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ರಾಜ್ಯದ ಪ್ರೌಢಶಾಲಾ ವಿದ್ಯಾರ್ಥಿಮತ್ತು ಶಿಕ್ಷಕರಿಗಾಗಿ ರಸಪ್ರಶ್ನೆ ಸ್ಪರ್ಧೆ,  ವಿಜ್ಞಾನ ಒಗಟು ಬಿಡಿಸುವ ಸ್ಪರ್ಧೆ, ಮಾದರಿ ತಯಾರಿಕೆ , ಉಪನ್ಯಾಸಗಳು ಮತ್ತು ತರಬೇತಿಗಳನ್ನು ಆಯೋಜಿಸುತ್ತಿದೆ.

  • ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಅರಿವು ಮೂಡಿಸುವುದು.
  • ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವವನ್ನು ಮೂಡಿಸುವುದು.
  • ವಿಜ್ಞಾನದ ಬಗ್ಗೆ ಆಸಕ್ತಿಯನ್ನು ಬೆಳೆಸುವುದು.
  • ಪ್ರಯೋಗಗಳ ಮೂಲಕ ಹೊಸ ಆವಿಷ್ಕಾರಗಳನ್ನು ಮಾಡಲು ವಿದ್ಯಾರ್ಥಿಗಳನ್ನು ಹುರಿದುಂಬಿಸುವುದು.
  • ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಸಕ್ತ ಬೆಳವಣಿಗೆ ಮತ್ತು ಅಭಿವೃದ್ಧಿಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು.
  • ವಿಜ್ಞಾನ, ತಂತ್ರಜ್ಞಾನ, ಗಣಿತ ಮತ್ತು ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಪ್ರಯೋಗಗಳ ಮೂಲಕ ನಾವೀನ್ಯತೆಯನ್ನು ಮೂಡಿಸಲು ಪ್ರೇರೆಪಿಸುವುದು.

ಭಾರತ ಸರ್ಕಾರವು 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅಜಾದಿ ಕೀ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಆರಂಭಿಸಿದೆ. ಕಳೆದ 75 ವರ್ಷಗಳ ದೇಶದ ಸಾಧನೆ, ಇತಿಹಾಸ, ಸಂಸ್ಕೃತಿ ಮತ್ತು ವೈವಿಧ್ಯ ಪ್ರದರ್ಶಿಸುವ ಮೂಲಕ ದೇಶವಾಸಿಗಳಲ್ಲಿ ಹೊಸ ಚೈತನ್ಯ ಮತ್ತು ಹುಮ್ಮಸನ್ನು ತುಂಬುವುದು ಅಮೃತ ಮಹೋತ್ಸವದ ಧ್ಯೇಯ.

ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಗಳ ಸಹಯೋಗದಲ್ಲಿ “ವಿಜ್ಞಾನ ಉತ್ಸವ” ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ರಾಜ್ಯದಲ್ಲಿನ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯ ವ್ಯವಸ್ಥೆಗಳು ಹಾಗೂ ಆತ್ಮನಿರ್ಭರತೆಗೆ ಅದರ ಕೊಡುಗೆಗಳನ್ನು ಪ್ರದರ್ಶಿಸುವುದು ಇದರ ಮೂಲ ಉದ್ದೇಶ. ವಿಜ್ಞಾನ ಉತ್ಸವ ಒಂದು ವರ್ಷದ ಕಾರ್ಯಕ್ರಮವಾಗಿದ್ದು ಸೆಪ್ಟೆಂಬರ್ 2021 ರಂದ್ದು ಪ್ರಾರಂಭವಾಗಿ ಆಗಸ್ಟ್‌ ನಲ್ಲಿ ಕೊನೆಗೊಳ್ಳುವುದು.

  

ಕ್ರಮ ಸಂಖ್ಯೆ

ಶೀರ್ಷಿಕೆ

ತಿಂಗಳ

ಯುಟ್ಯೂಬ್‌ ಲಿಂಕ್

ಕಾರ್ಯಕ್ರಮದ ವಿವರ

1.       

ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಂಸ್ಥೆಗಳು

ಸೆಪ್ಟಂಬರ್‌ 2021

https://youtu.be/dArQdEu-jeM

ವೀಕ್ಷಿಸಿ

2.       

ಮಾನವ ಸಂಪನ್ಮೂಲ ಅಭಿವೃದ್ಧಿ

ಅಕ್ಟೋಬರ್‌ 2021

https://www.youtube.com/watch?v=XC3CeqVEU&t=6372s

ವೀಕ್ಷಿಸಿ

3.       

ಸಂಶೋಧನಾ ಸೌಕರ್ಯ

ನವೆಂಬರ್‌ 2021

https://www.youtube.com/embed/czNOLGS2Ctk

ವೀಕ್ಷಿಸಿ

4.       

ದೇಶೀಯ ತಂತ್ರಜ್ಞಾನಗಳು

ಡಿಸೆಂಬರ್‌ 2021

https://www.youtube.com/embed/-XCT-EFuTcE

ವೀಕ್ಷಿಸಿ

5.       

ನಾವೀನ್ಯತೆ ಮತ್ತು ಸಣ್ಣೋದ್ಯಮೆ

ಜನವರಿ 2022

https://www.youtube.com/embed/OdG1O9n_PiY

ವೀಕ್ಷಿಸಿ

6.       

ವಿಜ್ಞಾನ ಸಂವಹನ

ಫೆಬ್ರವರಿ 2022

https://www.youtube.com/embed/Qw3P9J1QI00

ವೀಕ್ಷಿಸಿ

7.       

ಮಹಿಳಾ ವಿಜ್ಞಾನಿಗಳು

 ಮಾರ್ಚ್‌ 2022

https://www.youtube.com/embed/e1TuuHHpl7Y

ವೀಕ್ಷಿಸಿ

8.       

ವಿಜ್ಞಾನ ಮತ್ತು ಸಮಾಜ

ಏಪ್ರಿಲ್‌ 2022

https://www.youtube.com/embed/kid1PnSYJZ8

ವೀಕ್ಷಿಸಿ

9.       

ಭವಿಷ್ಯದ ತಂತ್ರಜ್ಞಾನಗಳು

ಮೇ 2022

https://www.youtube.com/embed/VNv45-hnaR8

ವೀಕ್ಷಿಸಿ

10.   

ಆತ್ಮನಿರ್ಭರ ಭಾರತಕ್ಕೆ ಮೂಲ ವಿಜ್ಞಾನದ ಕೊಡುಗೆ

ಜೂನ್‌ 2022

https://www.youtube.com/embed/TscWQOGE7Q8

ವೀಕ್ಷಿಸಿ

11.   

ಆತ್ಮರ್ನಿಭಾರತ ಮತ್ತು  ಕೈಗಾರಿಕೆ

ಜುಲೈ 2022

https://youtu.be/pVKHk6i4P6Y

ವೀಕ್ಷಿಸಿ

12.   

ಬೌದ್ಧಿಕ ಹಕ್ಕು

ಆಗಸ್ಟ್‌ 2022

https://youtu.be/09VYoJsyXQU

 ವೀಕ್ಷಿಸಿ

ಜನಸಾಮಾನ್ಯರಲ್ಲಿ ವಿಜ್ಞಾನ ವಿಷಯದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ  ವಿಜ್ಞಾನ್ ಪ್ರಸಾರ್ ಹಾಗೂ ಆಕಾಶವಾಣಿ ಬೆಂಗಳೂರು ಮತ್ತು ಆಕಾಶವಾಣಿ ಪಣಜಿ, ಗೋವಾ ರವರ ಸಹಯೋಗದೊಂದಿಗೆ 2016 ರಿಂದ ವಿಜ್ಞಾನ ರೇಡಿಯೋ ಧಾರಾವಾಹಿಯನ್ನು ಪ್ರಸಾರ ಮಾಡುತ್ತಿದೆ. ವಿಜ್ಞಾನ ರೇಡಿಯೋ ಧಾರಾವಾಹಿಯು ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ಮತ್ತು ಗೋವಾದಲ್ಲಿ ಕೊಂಕಣಿಯಲ್ಲಿ ಪ್ರಸಾರವಾಗುತ್ತಿದೆ. ಪ್ರತಿ ಧಾರಾವಾಹಿಯು 30 ನಿಮಿಷಗಳ 52 ಕಂತುಗಳನ್ನು ಹೊಂದಿದೆ.

ಕ್ರಮ ಸಂಖ್ಯೆ

ವಿಷಯ

ವರ್ಷ

1.       

ನೈಸರ್ಗಿಕ ವಿಪತ್ತಿನ ನಿರ್ವಹಣೆ

2016

2.       

ಸುಸ್ಥಿರ ಅಭಿವೃದ್ಧಿ

2017

3.       

ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ

2019

4.       

ಕೃತಕ ಬುದ್ಧಿಮತ್ತೆ

https://www.youtube.com/playlist?list=PLXFZ2a8hMet6Br4EGF6C9LM7Tl2iqW2yx

2021

ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಲ್ಲಿ ವಿಜ್ಞಾನ ಮತ್ತು ಗಣಿತದ ಬೋಧನೆ -ಕಲಿಕೆಯನ್ನು ಉತ್ಕೃಷ್ಟಗೊಳಿಸಲು ಶಿಕ್ಷಕರ ಪುಷ್ಟೀಕರಣ / ತರಬೇತಿ / ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ.

ಕಾರ್ಯಕ್ರಮದ ಉದ್ದೇಶಗಳು

  • ವಿಷಯ ಮತ್ತು ಭೋದನಾ ವಿಧಾನದ ಅಭಿವೃದ್ಧಿ
  • ವಿಜ್ಞಾನವನ್ನು ಕಲಿಯುವ ಮತ್ತು ಕಲಿಸುವ ಕಲೆಯ ಅನುಭವವನ್ನು ನೀಡಿವುದು
  • ವಿಜ್ಞಾನ ಪಠ್ಯಕ್ರಮದ ಸಂಪನ್ಮೂಲಗಳ ಪುಷ್ಟೀಕರಣ
  • ವಿಜ್ಞಾನದ ಅನ್ವೇಷನೆ ಮತ್ತು ಅನುಭವ

×
ABOUT DULT ORGANISATIONAL STRUCTURE PROJECTS